ಶೇಷಾದ್ರಿಪುರಂ ಕಾನೂನು ಕಾಲೇಜುಶೇಷಾದ್ರಿಪುರಂ, ಬೆಂಗಳೂರು-೫೬೦೦೨೦ (ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಗೆ
ಸಂಯೋಜಿತಗೊಂಡಿದೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿಯಿಂದ ಅನುಮೋದಿತವಾಗಿದೆ)

justis-lord

೩ ವರ್ಷದ ಎಲ್ಎಲ್.ಬಿ. ಕೋರ್ಸ್ ಅನ್ನು ನಿಯಂತ್ರಿಸುವ ನಿಯಮಗಳು

ಪ್ರವೇಶಕ್ಕಾಗಿ ಅರ್ಹತೆ

ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಕಾಯಿದೆಯೊಂದರ ಮೂಲಕ ಸ್ಥಾಪಿಸಲಾದ ಅಥವಾ ಮಾನ್ಯತೆ ಹೊಂದಿದ ಸಮಾನವಾದ ರಾಷ್ಟ್ರೀಯ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯವೆಂದು ಪರಿಗಣಿತ ಅಥವಾ ಭಾರತೀಯ ವಿಶ್ವವಿದ್ಯಾಲಯದ ಸ್ಥಾನಮಾನಕ್ಕೆ ಸಮಾನವೆಂದು ಸಮರ್ಥ ಪ್ರಾಧಿಕಾರದಿಂದ ಗುರುತಿಸಲ್ಪಟ್ಟ ವಿದೇಶಿ ವಿಶ್ವವಿದ್ಯಾಲಯದಿಂದ ಯಾವುದೇ ಜ್ಞಾನ ವಿಭಾಗದಲ್ಲಿ ಪದವಿ ಪಡೆದ ಅರ್ಜಿದಾರ, ಕಾನೂನಿನಲ್ಲಿ ೩ ವರ್ಷಗಳ ಎಲ್ಎಲ್.ಬಿ ಪದವಿ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.ಈ ಕೋರ್ಸ್‌ನ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಮೇಲೆ ತಿಳಿಸಿರುವ ರೀತ್ಯ ಗುರುತಿಸಿರುವ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳಲ್ಲಿ ಕನಿಷ್ಠ ಶೇಕಡಾ ೪೫% ಅಂಕಗಳನ್ನು ಪಡೆದಿರಬೇಕು. ಎಸ್ಸಿ ಮತ್ತು ಎಸ್ಟಿ ಅರ್ಜಿದಾರರಿಗೆ ಕನಿಷ್ಟ ಅಂಕ ೪೦%.

ಅರ್ಹ ವಿದ್ಯಾರ್ಥಿಯು ೧೦+೨+೩ ಮಾದರಿಯ ಅಧ್ಯಯನವನ್ನು ಪೂರೈಸಿರಬೇಕು.

ಮೊದಲ ವರ್ಷಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಯು ಪ್ರವೇಶದ ಸಮಯದಲ್ಲಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

  • ಎಸ್ಎಸ್ಎಲ್ ಸಿ / ೧೦ನೇ ತರಗತಿ, ಪಿಯುಸಿ / ೧೨ನೇ / ೧೦+೨, ಮತ್ತು ಪದವಿಯ ಮೂಲ ಅಂಕ ಪತ್ರಿಕೆಗಳ ಒಂದು ಜೊತೆ ಛಾಯಾಪ್ರತಿಗಳು.
  • ಘಟಿಕೋತ್ಸವ / ಪದವಿ ಪ್ರಮಾಣಪತ್ರ.
  • ಹಿಂದೆ ಓದಿರುವ ವಿದ್ಯಾಸಂಸ್ಥೆಯಿಂದ ವರ್ಗಾವಣೆ ಪ್ರಮಾಣಪತ್ರ.
  • ಕರ್ನಾಟಕ ರಾಜ್ಯದ ಹೊರಗಿನ ವಿದ್ಯಾರ್ಥಿಗಳಿಗೆ ವಲಸೆ ಪ್ರಮಾಣಪತ್ರ.
  • ಏಳು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.
  • ಆಧಾರ್ ಕಾರ್ಡ್

ಮೀಸಲಾತಿ: ಎಸ್ಸಿ/ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಜಾರಿಯಲ್ಲಿಡಲಾಗುವುದು.

ಪರೀಕ್ಷೆಯ ಯೋಜನಾ ವಿಧಾನ

ಪರೀಕ್ಷೆಯ ಪ್ರತಿ ಪತ್ರಿಕಾ ವಿಷಯಕ್ಕೆ ೮೦ + ೨೦ ಅಂಕಗಳ ಸೂತ್ರ ಅನ್ವಯವಾಗುತ್ತೆ. ವಿಶ್ವವಿದ್ಯಾಲಯದ ನಿಯಮದನುಸಾರ, ೮೦ ಅಂಕಗಳ ಪರೀಕ್ಷಾಪತ್ರಿಕೆ ೩ ಗಂಟೆಗಳ ಅವಧಿಯದಾಗಿದ್ದು, ೨೦ ಅಂಕಗಳನ್ನು ಕಾಲೇಜಿನ ಆಂತರಿಕ ಮೌಲ್ಯಮಾಪನವಕ್ಕೆ ಒಳಪಡಿಸಿ ನೀಡಲಾಗುವುದು.

ಉತ್ತೀರ್ಣತೆಯ ಮಾನದಂಡ

ಯಾವುದೇ ವಿದ್ಯಾರ್ಥಿಯು ಪ್ರತಿ ಸೆಮಿಸ್ಟರ್‌ನ ಪ್ರತಿ ಪತ್ರಿಕೆಯ ಪರೀಕ್ಷೆಯಲ್ಲಿಯೂ ಕನಿಷ್ಠ ೪೦% ಅಂಕಗಳನ್ನು ಪಡೆಯದಿದ್ದಲ್ಲಿ, ಅಂತಹ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುವುದಿಲ್ಲ.

ಮೇಲೆ ನಮೂದಿಸಿರುವ ಕನಿಷ್ಟ ಅಂಕಗಳನ್ನು, ಎಲ್ಲಾ ಸೆಮಿಸ್ಟರ್‌ಗಳ ಪರೀಕ್ಷೆಯಲ್ಲಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಕೆಳಗೆ ನಮೂದಿಸಿರುವ ಶ್ರೇಯಾಂಕದನುಸಾರ ನೀಡಲಾಗುವುದು.

ಶ್ರೇಣಿಗಳು

  • ೪೦% ಮತ್ತು ಅದಕ್ಕಿಂತ ಹೆಚ್ಚಿನ ಆದರೆ ೫೦% ಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಯನ್ನು ಪಾಸ್ ವರ್ಗ ಎಂದು ಘೋಷಿಸಲಾಗುತ್ತದೆ.
  • ೫೦% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನುಗಳಿಸುವ ವಿದ್ಯಾರ್ಥಿಗಳು ಆದರೆ ಒಟ್ಟು ಅಂಕಗಳ ೬೦% ಕ್ಕಿಂತ ಕಡಿಮೆ ಪರೀಕ್ಷೆಗೆ ನಿಗದಿಪಡಿಸಿದ ಎರಡನೇ ಶ್ರೇಯಾಂಕ ವರ್ಗವೆಂದು ನಿಗದಿಪಡಿಸಲಾಗುವುದು.
  • ೬೦% ಮತ್ತು ಅದಕ್ಕಿಂತ ಹೆಚ್ಚಿನ ಆದರೆ ೭೦% ಕ್ಕಿಂತ ಕಡಿಮೆ ಪಡೆದ ವಿದ್ಯಾರ್ಥಿಗಳನ್ನು ಪ್ರಥಮ ದರ್ಜೆಯಲ್ಲಿ ಇರಿಸಲಾಗುತ್ತದೆ.
  • ೮೫% ರಿಂದ ೯೫% ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹೧೦, ೦೦೦/- ನಗದು ಬಹುಮಾನವನ್ನು ನೀಡಲಾಗುವುದು (ಕಟ್ಟುಪಾಡಿಗನ್ವಯಿಸಿ).
  • ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ೯೫% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ೧ನೇ ವರ್ಷದ ಕಾನೂನು ಕೋರ್ಸ್‌ಗಳಿಗೆ ಪ್ರವೇಶದ ಸಮಯದಲ್ಲಿ, ಪ್ರವೇಶ ಶುಲ್ಕ ಪಾವತಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುವುದು (ಕಟ್ಟುಪಾಡಿಗನ್ವಯಿಸಿ). (ವಿಶ್ವವಿದ್ಯಾಲಯದ ಶುಲ್ಕಕ್ಕೆ ವಿನಾಯಿತಿ ಇಲ್ಲ ಅದನ್ನು ಮಾತ್ರ ಪಾವತಿಸಲೇಬೇಕು).
  • ಎಲ್ಎಲ್.ಬಿ. ಯಲ್ಲಿ ವಿದ್ಯಾರ್ಥಿಯ ಶ್ರೇಣಿಯನ್ನು, ಎಲ್ಲಾ ೬ ಸೆಮೆಸ್ಟರ್‌ಗಳ ಪರೀಕ್ಷಾ ಪತ್ರಿಕೆಗಳಲ್ಲೂ ಗಳಿಸಿದ ಅಂಕಗಳ ಆಧಾರದ ಮೇಲೆ (ಕ್ಲಿನಿಕಲ್ ಕೋರ್ಸ್ ನ ಅಂಕಗಳನ್ನು ಹೊರತುಪಡಿಸಿ) ಘೋಷಿಸಲಾಗುವುದು. ಯಾವುದೇ ವಿದ್ಯಾರ್ಥಿಯು ಪ್ರತಿಯೊಂದು ಪರೀಕ್ಷೆಯಲ್ಲಿಯೂ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ (ಅಂದರೆ, ೧ ರಿಂದ ೬ ‌‌ರ ಎಲ್ಲ ಸೆಮಿಸ್ಟರ್‌ಗಳಲ್ಲಿ) ಶ್ರೇಣಿಗೆ ಅರ್ಹರಾಗುತ್ತಾರೆ.

Got to Top