ಶೇಷಾದ್ರಿಪುರಂ ಕಾನೂನು ಕಾಲೇಜುಶೇಷಾದ್ರಿಪುರಂ, ಬೆಂಗಳೂರು-೫೬೦೦೨೦ (ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಗೆ
ಸಂಯೋಜಿತಗೊಂಡಿದೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿಯಿಂದ ಅನುಮೋದಿತವಾಗಿದೆ)

justis-lord

ಕಾಲೇಜು ಅವಲೋಕನ

ಶೇಷಾದ್ರಿಪುರಂ ಶಿಕ್ಷಣ ದತ್ತಿ, ನಗರದ ಹೃದಯಭಾಗದಲ್ಲಿರುವ ಶೇಷಾದ್ರಿಪುರದಲ್ಲಿ ಕಾನೂನು ಕಾಲೇಜನ್ನು ೧೯೮೪-೮೫ರ ಅವಧಿಯಲ್ಲಿ ಪ್ರಾರಂಭಿಸಿತು. ದತ್ತಿಯು ಸಮಾನಮನಸ್ಕರ ಮತ್ತು ಪ್ರೀತಿಪಾತ್ರರ ಮನೋಭಿಲಾಷೆ ಹಾಗೂ ಮಹತ್ವಾಕಾಂಕ್ಷೆಯನ್ನು ಪರಿಗಣಿಸಿ, ಕಾನೂನು ಶಿಕ್ಷಣವನ್ನು ನೀಡುವ ಮನಸ್ಸು ಮಾಡಿ, ಬಹಳ ಮುಖ್ಯ ಹೆಜ್ಜೆಯಿಟ್ಟಿದ್ದಲ್ಲದೆ ಕಾನೂನಿನ ಬಗ್ಗೆ ಅರಿವನ್ನು ಮೂಡಿಸುವ, ಸಮಾಜದಲ್ಲಿನ ಅಸಹಾಯಕರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನೂ ಈಡೇರಿಸುವ ನಿಟ್ಟಿನಲ್ಲಿ ಕಾಲೇಜು ಕಾರ್ಯಪ್ರವೃತ್ತವಾಯಿತು.

ನಮ್ಮ ಕಾನೂನು ಕಾಲೇಜು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿಯಿಂದ ಮಾನ್ಯತೆ ಪಡೆದಿದೆ.

ಪ್ರಾರಂಭದಲ್ಲಿ, ಅಂದರೆ, ೧೯೮೪ರಲ್ಲಿ ಮೂರು ವರ್ಷದ ಎಲ್ಎಲ್.ಬಿ ಕೋರ್ಸ್ ಇಂದ ಆರಂಭಗೊಂಡಿದ್ದರ ಜೊತೆ, ೨೦೦೪-೦೫ ರಿಂದ ಐದು ವರ್ಷದ ಎಲ್.ಎಲ್.ಬಿ ಕಾನೂನು ಪದವಿ ಕೋರ್ಸನ್ನೂ ಆರಂಭಿಸಲಾಯಿತು.

ಶೇಷಾದ್ರಿಪುರಂ ಕಾನೂನು ಕಾಲೇಜಿಗೆ ನಿಯಮಬದ್ಧವಾಗಿ ನಿಯೋಜಿತವಾಗಿರುವ ಆಡಳಿತ ಮಂಡಳಿ ಇದೆ. ದತ್ತಿಯಿಂದ ನಿಯೋಜಿತವಾಗಿರುವ ಕಾನೂನು ಕಾಲೇಜಿನ ಆಡಳಿತ ಮಂಡಳಿಗೆ, ಪ್ರಖ್ಯಾತ ವಕೀಲರಾದ ಶ್ರೀ ಕೆ. ಕೃಷ್ಣಸ್ವಾಮಿ ಅವರು ಅಧ್ಯಕ್ಷರಾಗಿದ್ದು, ಆಡಳಿತ ಮಂಡಳಿಯಲ್ಲಿ, ಶಿಕ್ಷಣ ತಜ್ಞರು, ಕಾನೂನು ದಿಗ್ಗಜರು, ನಿರ್ವಹಣಾ ತಜ್ಞರು ಮತ್ತು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಶ್ರೇಷ್ಠ ವ್ಯಕ್ತಿಗಳು ಇದ್ದಾರೆ.

ಕಾನೂನು ಕಾಲೇಜು ಆಡಳಿತ ಮಂಡಳಿಯು ವರ್ಷಕ್ಕೆ ನಾಲ್ಕು ಬಾರಿ, ಆಡಳಿತಾತ್ಮಕ ಮತ್ತು ಶೈಕ್ಷಣಿಕ ಪ್ರಗತಿಯ ಪರಿಶೀಲನೆಗಾಗಿ ನಿಯಮಿತವಾಗಿ ಸಭೆ ಸೇರುತ್ತದೆ.

ದೃಷ್ಟಿ ಮತ್ತು ಧ್ಯೇಯ

ನಮ್ಮ ದೃಷ್ಟಿ

ಪ್ರತಿಯೊಬ್ಬ ವ್ಯಕ್ತಿಯನ್ನೂ ಜ್ಞಾನ ಮತ್ತು ಆತ್ಮವಿಶ್ವಾಸದಿಂದ ಸಶಕ್ತಗೊಳಿಸುವುದು.

ನಮ್ಮ ಧ್ಯೇಯ

ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ ಜೀವಂತ, ನೈತಿಕವಾಗಿ ನೇರ, ಸಾಮಾಜಿಕವಾಗಿ ಜವಾಬ್ದಾರಿಯುತರನ್ನಾಗಿ ಸಿದ್ಧಗೊಳಿಸಿ, ಸಕ್ರಿಯ ಮತ್ತು ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ನಾಗರಿಕರನ್ನಾಗಿಸಿ, ಅವರನ್ನು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಸಿದ್ಧರಾಗಿಸುವುದಾಗಿದೆ.


೫ ವರ್ಷ ಮತ್ತು ೩ ವರ್ಷ ಎಲ್ಎಲ್.ಬಿ. ಎರಡೂ ಕೋರ್ಸ್ ಗಳಲ್ಲಿ ಮುಂದಿನ ಉನ್ನತ ತರಗತಿಗಳಿಗೆ ಬಡ್ತಿಗಾಗಿ ಅರ್ಹತೆ

ಮುಂದಿನ ಉನ್ನತ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಅಥವಾ ಬಡ್ತಿ ಪಡೆಯಲು ವಿದ್ಯಾರ್ಥಿಯು ಹಿಂದಿನ ಸೆಮಿಸ್ಟರ್‌ಗಳಿಗೆ ಪರೀಕ್ಷಾ ಶುಲ್ಕವನ್ನು ಪಾವತಿಸಿರಲೇಬೇಕು.

ಯಾವುದೇ ಸೆಮಿಸ್ಟರ್ ಪರೀಕ್ಷೆಗೆ ಮೊದಲ ಬಾರಿಗೆ ಹಾಜರಾಗುವ ವಿದ್ಯಾರ್ಥಿಗಳು ತರಗತಿಯ ಬೋಧನಾ ಶುಲ್ಕ ಮತ್ತು ಎರಡೂ ಸೆಮಿಸ್ಟರ್‌ಗಳಿಗೆ ಪರೀಕ್ಷಾ ಶುಲ್ಕವನ್ನು ತಡಮಾಡದೆ ಪಾವತಿಸಬೇಕು. ವಿದ್ಯಾರ್ಥಿಯು ಯಾವುದೇ ಸೆಮಿಸ್ಟರ್‌ಗೆ ಪರೀಕ್ಷಾ ಶುಲ್ಕವನ್ನು ಪಾವತಿಸಲು ವಿಫಲವಾದರೆ ಆ ನಿರ್ದಿಷ್ಟ ತರಗತಿಗೆ ಅಂತಹ ವಿದ್ಯಾರ್ಥಿಯ ಪ್ರವೇಶವು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಯು ಮತ್ತೊಮ್ಮೆ ಬೋಧನಾ ಶುಲ್ಕವನ್ನು ಪಾವತಿಸುವ ಮೂಲಕ ಆ ತರಗತಿಗೆ ಮರುಪ್ರವೇಶವನ್ನು ಪಡೆಯಬೇಕಾಗುತ್ತದೆ ಮತ್ತು ಆ ತರಗತಿಯಲ್ಲಿನ ಬೆಸ ಅಥವಾ ಸಮ ಸೆಮಿಸ್ಟರ್‌ಗೆ ಪರೀಕ್ಷಾ ಶುಲ್ಕವನ್ನು ಸಹ ಪಾವತಿಸಬೇಕು. ತದನಂತರ ಮಾತ್ರವೇ ಆ ವಿದ್ಯಾರ್ಥಿಗೆ ಪರೀಕ್ಷೆಯನ್ನು ಬರೆಯಲು ಅನುಮತಿಸಲಾಗುತ್ತದೆ. ಪೂರಕ ಪರೀಕ್ಷೆಗಳನ್ನೂ ತೆಗೆದುಕೊಳ್ಳಲು ವಿದ್ಯಾರ್ಥಿಗೆ ಅವಕಾಶ ನೀಡಲಾಗುವುದು.

೫ ವರ್ಷಗಳ ಎಲ್ಎಲ್.ಬಿ. ಕೋರ್ಸ್‌ಗೆ ಅರ್ಹತಾ ಮಾನದಂಡಗಳು:

  • ಪ್ರತಿ ತರಗತಿಯಲ್ಲಿ ಕನಿಷ್ಠ ೨ ವಿಷಯಗಳಲ್ಲಿ ಉತ್ತೀರ್ಣರಾಗದ ಹೊರತು ಯಾವುದೇ ವಿದ್ಯಾರ್ಥಿಯನ್ನು ಕೋರ್ಸ್‌ನ ಮುಂದಿನ ವರ್ಷಕ್ಕೆ ಬಡ್ತಿ ನೀಡಲಾಗುವುದಿಲ್ಲ.
  • ವಿದ್ಯಾರ್ಥಿಗಳು ಪ್ರವೇಶದ ದಿನಾಂಕದಿಂದ ೧೦ ವರ್ಷಗಳಲ್ಲಿ ಸಂಪೂರ್ಣ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅವಕಾಶವಿದೆ.

೩ ವರ್ಷಗಳ ಎಲ್ಎಲ್.ಬಿ. ಕೋರ್ಸ್ ಗೆ ಅರ್ಹತಾ ಮಾನದಂಡಗಳು:

  • ಪ್ರವೇಶ ಪಡೆದ ದಿನಾಂಕದಿಂದ ೬ ವರ್ಷಗಳಲ್ಲಿ ವಿದ್ಯಾರ್ಥಿಗಳು ಸಂಪೂರ್ಣ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅವಕಾಶವಿದೆ.
  • ೧ನೇ ಶಿಕ್ಷಣಾವಧಿಯಿಂದ ೬ನೇ ಶಿಕ್ಷಣಾವಧಿಯ ೩ ವರ್ಷಗಳ ಎಲ್ಎಲ್.ಬಿ. ಕೋರ್ಸ್‌ಗೆ ಅನುಮತಿಸಲು ಮತ್ತು ಒಟ್ಟಾಗಿ ಮುಂದುವರೆಸುವ ವ್ಯವಸ್ಥೆಗೊಳಪಡಲು, ನಿಗದಿತ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿಯಾಧಾತರಿವಾಗಿರುತ್ತದೆ.
  • ಕೋರ್ಸ್ ಅನ್ನು ಮಧ್ಯದಲ್ಲೇ ನಿಲ್ಲಿಸುವ ವಿದ್ಯಾರ್ಥಿಯು ಎಲ್‌ಎಲ್‌.ಬಿ. ಯ ಮೂರು / ಐದು ವರ್ಷಗಳ ಕೋರ್ಸ್ ನ ನಿಗದಿತ ಬೋಧನಾ ಶುಲ್ಕವನ್ನು ಪಾವತಿಸಲೇಬೇಕಾಗುತ್ತದೆ.
  • ಪರೀಕ್ಷೆಯನ್ನು ಪೂರ್ಣಗೊಳಿಸಲು ಪ್ರತಿ ಸೆಮಿಸ್ಟರ್‌ನ ನಂತರ ಕೋರ್ಸ್ ನ ಪರೀಕ್ಷಾ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.
  • ಯಾವುದೇ ಅಭ್ಯರ್ಥಿಯು ನಿಯಮಾವಳಿಗಳ ಪ್ರಕಾರ ಕೆಳವರ್ಗದ ಸೆಮೆಸ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ, ಮುಂದಿನ ಉನ್ನತ ವರ್ಗಕ್ಕೆ ತೆರಳಲು ಅರ್ಹರಾಗಿರುವುದಿಲ್ಲ.

Got to Top